ಕುಲದಲ್ಲಿ ಕೀಳ್ಯಾವುದೋ
ಸತ್ಯ ಹರಿಶ್ಚಂದ್ರ ಘಂಟಸಾಲ
ಹುಣಸೂರು ಕೃಷ್ಣಮೂರ್ತಿ
ಜಿ. ವಿ. ರಮಣನ್
ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ
ಮತದಲ್ಲಿ ಮೇಲ್ಯಾವುದೋ
ಹುಟ್ಟಿ ಸಾಯುವ ಮನ್ಷಾ ಮನ್ಷಾನ್ ಮಧ್ಯ
ಕೀಳ್ಯಾವ್ದು ಮೇಲ್ಯಾವುದೋ ||
ತಿಲಕ ಇಟ್ಟರೆ ಸ್ವರ್ಗವು ಸಿಗದು
ವಿಭೂತಿ ಬಳಿದರೆ ಕೈಲಾಸ ಬರದು
ಇಟ್ಟ ಗಂಧ ಬೂದಿ ನಾಮ
ಚಟ್ಟ ಕಟ್ಟಲು ನಿರ್ನಾಮ ||
ಶೈವರಿಗೆಲ್ಲ ಶಿವ ದೊಡ್ಡೋನು
ವೈಷ್ಣವರಿಗೆ ಹರಿ ಸರ್ವೋತ್ತಮನು
ಉತ್ತಮ ಮಧ್ಯಮ ಅಧಮರೆಲ್ಲರೂ
ಸತ್ತ ಮೇಲೆ ಸಮರಾಗ್ತಾರೋ ||
ತಲೆಗೊಂದು ರೀತಿ ನೀತಿಯ ಜಾತಿಯ
ಹೇಳುವ ಜೋಗಿ ಸಿದ್ಧರು ಗುರುಗಳು
ಮಸಣದಲ್ಲಿ ಈ ವೀರಬಾಹುವ
ಕೈಯ ಮೇಲ್ಗಡೆ ಸಮರಾಗ್ತಾರೋ ||
ಸತ್ಯ ಹರಿಶ್ಚಂದ್ರ
ಚಿತ್ರ ನೋಡಿ